ಎಲ್‌ಪಿಜಿ ಸಿಲಿಂಡರ್ ₹500ಕ್ಕೆ: ತಕ್ಷಣ ಈ ಯೋಜನೆಗೆ ಅರ್ಜಿ ಸಲ್ಲಿಸಿ!

ಈಗ ಎಲ್‌ಪಿಜಿ ಸಿಲಿಂಡರ್ ಬೆಲೆ ₹820 ರಿಂದ ₹900 ಒಳಗೆ ಇದೆ, ಆದರೆ, ಇಂದಿನಿಂದ ಕೇವಲ ₹500 ರೂಪಾಯಿಗೆ ಸಿಲಿಂಡರ್ ಪಡೆಯುವ ಅವಕಾಶ ನಿಮಗಿದೆ. ಇದಕ್ಕಾಗಿ ನೀವು ಸರಿಯಾದ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಹೆಚ್ಚು ಹಣ ನೀಡದೆ ಸಿಲಿಂಡರ್ ಪಡೆದುಕೊಳ್ಳಬಹುದು.

ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಉಜ್ವಲ ಯೋಜನೆ 2024 ಅಡಿಯಲ್ಲಿ ಸಿಗುತ್ತದೆ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ 2024

ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ.

ಈ ಯೋಜನೆಯು ಬಡ ಕುಟುಂಬಗಳಿಗಾಗಿ ಕೇಂದ್ರ ಸರ್ಕಾರದ ಮುಖಾಂತರ ಆರಂಭಗೊಂಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಯೋಜನೆ 2016ರಲ್ಲಿ ಆರಂಭವಾಯಿತು. ಇದರ ಮುಖ್ಯ ಉದ್ದೇಶವು ದೇಶದ ಬಡ ಕುಟುಂಬಗಳಿಗೆ ಸಿಲಿಂಡರ್ ಹಾಗೂ ಎಲ್‌ಪಿಜಿ ಸೌಲಭ್ಯವನ್ನು ನೀಡುವುದು.

ಇದರಲ್ಲಿ ಅತಿ ಹೆಚ್ಚು ಬಡತನದಲ್ಲಿರುವ ಕುಟುಂಬಗಳು, ವಿಶೇಷವಾಗಿ ಮಹಿಳೆಯರಿಗೆ, ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಉಚಿತವಾಗಿ ಒದಗಿಸಲಾಗುತ್ತದೆ.

ಒಂದು ವೇಳೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ, ನಿಮಗೆ ಪ್ರತಿ ತಿಂಗಳು ಕೇವಲ ₹500 ಪಾವತಿಸಿ ಸಿಲಿಂಡರ್ ಅವಕಾಶ ನಿಮಗೆ ಸಿಗುತ್ತೆ.

ಯೋಜನೆಯ ಉದ್ದೇಶಗಳು:

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ಬಡ ಕುಟುಂಬಗಳಿಗೆ ಆರ್ಥಿಕ ಸುಧಾರಣೆಗೆ ನೆರವು.

ಅಡುಗೆ ಸಮಯದಲ್ಲಿ ಉಂಟಾಗುವ ಹಾನಿಕರ ಹೊಗೆಯನ್ನು ತಡೆಯುವುದು.

ಮಹಿಳೆಯರ ಆರೋಗ್ಯ ಕಾಪಾಡುವುದು.

ಅಡಿಗೆಯ ಸಮಯದ ಉಲ್ಲಾಸ ಹೆಚ್ಚಿಸಿ, ಮಹಿಳೆಯರ ಜೀವನ ಶೈಲಿಯನ್ನು ಸುಧಾರಿಸುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳು:

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ನಿರ್ದಿಷ್ಟ ಅರ್ಹತೆಗಳು ಇದೆ .

ಈ ಯೋಜನೆಯಡಿಯಲ್ಲಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.

  1. ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ:

ಈ ಯೋಜನೆ ವಿಶೇಷವಾಗಿ ಬಡ ಮಹಿಳೆಯರಿಗಂತಲೆ ಏರ್ಪಾಡು ಮಾಡಲಾಗಿದೆ. ಅರ್ಜಿದಾರರು ಮಹಿಳೆಯರಾಗಿರಬೇಕು.

  1. ಈ ಮೊದಲು ಗ್ಯಾಸ್ ಸಿಲಿಂಡರ್ ಪಡೆದಿರಬಾರದು: ಗ್ಯಾಸ್ ಸಿಲಿಂಡರ್ ಮೊದಲೇ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ.
  2. ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್: ಅರ್ಜಿ ಸಲ್ಲಿಸಲು ಬಿಪಿಎಲ್ ಅಥವಾ ಅಂತ್ಯೋದಯ ಅನ್ನ ಯೋಜನೆಗೆ ಸಂಬಂಧಿಸಿದ ರೇಷನ್ ಕಾರ್ಡ್ ಹೊಂದಿರುವುದು ಅಗತ್ಯ.
  3. ವಯೋಮಿತಿ:

ಅರ್ಜಿದಾರೆಯ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 59 ವರ್ಷದೊಳಗಡೆ ಇರಬೇಕಾಗುತ್ತದೆ.

  1. ಆದಾಯ ಮಿತಿ:

ವಾರ್ಷಿಕ ಆದಾಯವು ಕಡಿಮೆ ಇರಬೇಕಾಗಿರುತ್ತೆ. ಇದು ನಿರ್ದಿಷ್ಟ ಬಡತನ ರೇಖೆಯ ಅಡಿಯಲ್ಲಿ ಬರುವ ಕುಟುಂಬಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ .

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಕಡ್ಡಾಯ ದಾಖಲೆಗಳನ್ನು ನೀಡಬೇಕಾಗುತ್ತೆ :

  1. ಆಧಾರ್ ಕಾರ್ಡ್:

ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್ 10 ವರ್ಷ ಮೀರಿರಬಾರದು ಅಂದರೆ ನೀವು ಆಧಾರ್ ಕಾರ್ಡ್ ಮಾಡಿಸಿಕೊಂಡು ಹತ್ತು ವರ್ಷ ಮೀರಬಾರದು ಇದರ ಒಳಗಡೆ ಇರಬೇಕು ಹತ್ತು ವರ್ಷ ಮೀರಿದರೆ ದಯವಿಟ್ಟು ಅಪ್ಡೇಟ್ ಮಾಡಿಸಿಕೊಳ್ಳಿ.

  1. ಆಧಾರ್ ಕಾರ್ಡ್ ಲಿಂಕ್: ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು.
  2. ಬ್ಯಾಂಕ್ ಪಾಸ್ ಬುಕ್: ಬ್ಯಾಂಕ್ ಪಾಸ್ ಬುಕ್ ನಲ್ಲಿನ ಖಾತೆ ಚಲಾವಣೆಯಲ್ಲಿ ಇರಬೇಕು .
  3. ರೇಷನ್ ಕಾರ್ಡ್:

ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಅಗತ್ಯವಾಗಿರುತ್ತೆ.

  1. ಜಾತಿ ಮತ್ತು ಆದಾಯ ಪ್ರಮಾಣಪತ್ರ:

ಜಾತಿ ಹಾಗೂ ಆದಾಯ ಪ್ರಮಾಣ ಪತ್ರವು ಸರ್ಕಾರದ ನಿಗದಿತ ಆದಾಯ ಮಿತಿಯ ಒಳಗಡೆ ಇರಬೇಕು.

  1. ಮೊಬೈಲ್ ಸಂಖ್ಯೆ:

ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರಬೇಕಾಗುತ್ತದೆ .

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ ಗಮನಿಸಿ :

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಬಹಳ ಸರಳವಾಗಿದೆ. ನೀವು ಆನ್ಲೈನ್ ಮೂಲಕ ಅಥವಾ ಹತ್ತಿರ ಇರುವ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

  1. ಅಧಿಕೃತ ವೆಬ್‌ಸೈಟ್: ನೇರವಾಗಿ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸಲು ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಆನ್ಲೈನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ .
  2. ಸೇವಾ ಕೇಂದ್ರಗಳು: ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಥವಾ ಗ್ಯಾಸ್ ಏಜೆನ್ಸಿಗಳ ಮೂಲಕ ಅರ್ಜಿ ಸಲ್ಲಿಸಬಹುದು.
  3. ಆನ್ಲೈನ್ ಮೂಲಕ:

ನೀವು ನಿಮ್ಮ ಮೊಬೈಲ್ ಬಳಸಿ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದರಿಂದ ನೀವು ಹೊರಗಡೆ ಹೋಗದೆ ನಿಮ್ಮ ಮನೆಯಿಂದಲೇ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಪಡೆಯುತ್ತೀರಿ.

  1. ಗ್ಯಾಸ್ ಏಜೆನ್ಸಿ:

ಹತ್ತಿರ ಇರುವ ಗ್ಯಾಸ್ ಏಜೆನ್ಸಿಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶವಿದೆ.

ಅವುಗಳಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ಮಾರ್ಗದರ್ಶನವನ್ನು ಪಡೆಯಬಹುದು.

ಕೊನೆ ಮಾತು :

ಈ ಯೋಜನೆಯು ದೇಶದ ಬಡ ಮಹಿಳೆಯರಿಗೆ ಮತ್ತು ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ನೀಡಲು ಉದ್ದೇಶಸಲಾಗಿದೆ .

ಆಸಕ್ತ ಮಹಿಳೆಯರು ಈ ಅವಕಾಶವನ್ನು ಪಡೆದುಕೊಳ್ಳಿ, ನಿಮ್ಮ ಆರೋಗ್ಯವನ್ನು ಕಾಪಾಡಿ, ನಿಮ್ಮ ಮನೆ ಅಡಿಗೆಯನ್ನು ಸುಲಭಗೊಳಿಸಿ.

Leave a Comment

 Join WhatsApp Group